ಬೆಳ್ತಂಗಡಿ : ಅಕ್ರಮ ಗಣಿಗಾರಿಕೆ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ಮೇ 18 ರಂದು ಸಂಜೆ ವೇಳೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ 18 ರಂದು ಒಂದು ಪ್ರಕರಣ ದಾಖಲಿಸಿದ್ದರು. ಬೆಳ್ತಂಗಡಿ ಪೊಲೀಸರು ಮತ್ತು ಬೆಳ್ತಂಗಡಿ ತಹಶೀಲ್ದಾರ್ ನೀಡಿದ ವರದಿಯ ಆಧಾರದಲ್ಲಿ ದಕ್ಷಿಣ ಕನ್ನಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮೇ 20 ರಂದು ಸ್ಥಳ ಮಹಜರು ಮಾಡಿ ಈ ಸಂಬಂಧ ಪ್ರಮೋದ್ ಗೌಡ ದಿಡುಪೆ, ಶಶಿರಾಜ್ ಶೆಟ್ಟಿ ಹಾಗೂ ಸೂರಪ್ಪ ಪೂಜಾರಿ ಎಂಬವರ ವಿರುದ್ಧ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮೇ 23 ರಂದು ಪ್ರಕರಣ ದಾಖಲಿಸಿದ್ದಾರೆ.
ಗಣಿ ಇಲಾಖೆಯ ನೀಡಿದ ದೂರು: ಸ್ಥಳ ಮಹಜರು ನಡೆಸಿದ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನಲ್ಲಿ ಆರೋಪಿಗಳು 1,571.7 ಮೆಟ್ರಿಕ್ ಟನ್ ಕಟ್ಟಡ ಕಲ್ಲು ಸ್ಟೋಟ ಮಾಡಿ ಸಾಗಾಟ ಮಾಡಿರುವುದು ಕಂಡು ಬಂದಿದ್ದು. ಸುಮಾರು 65-70 ಮೆಟ್ರಿಕ್ ಟನ್ ಕಲ್ಲು ದಾಸ್ತಾನು ಮಾಡಿರುವುದು ಕಂಡು ಬಂದಿದ್ದು. ಇದರಿಂದ ಆರೋಪಿಗಳು ಅಕ್ರಮವಾಗಿ ಸರಕಾರದ ಅಮೂಲ್ಯ ಉಪಖನಿಜವಾದ ಕಟ್ಟಡಕಲ್ಲನ್ನು ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಸರಕಾರಕ್ಕೆ ರಾಜಸ್ವ ಸಂದಾಯ ಮಾಡದೆ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುತ್ತಿರುವುದಯ ದೃಢಪಟ್ಟಿರುವುದರಿಂದ mines & minerals (development and regulation) act 1957 ) amendment 2015 ) ರ ಕಲಂ 4, 4 (1A) ಹಾಗೂ Karnataka minor mineral concession rules 1994 (Amendment Rules 2023) ರ ನಿಯಮ 3(1), 42(1), 43 ಮತ್ತು 44 ಗಳ ಶಿಕ್ಷೆಗೆ ಬದ್ದರಾದ ಅಪರಾಧವಾಗಿರುವುದು ದೃಢಪಟ್ಟಿರುತ್ತದೆ. MMDR act 1957 (Amendment 2015) ರ ಕಲಂ 22 ರನ್ವಯ CRPC 200 ಅಡಿಯಲ್ಲಿ ದೂರು ನೀಡುವ ಅಧಿಕಾರ ಹೊಂದಿದ್ದು, ಅನಧಿಕೃತ ಕಟ್ಟಡಕಲ್ಲು ಗಣಿಗಾರಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕಾಗಿ ಮಾನ್ಯ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಬೆಳ್ತಂಗಡಿಗೆ ಮೇ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಗಿರೀಶ್ ಮೋಹನ್ ಎಸ್.ಎನ್. ದೂರು ದಾಖಲಿಸಿದ್ದಾರೆ.