ಬೆಳ್ತಂಗಡಿ : ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಕನ್ಯಾಡಿ ಗ್ರಾಮದ ಗುರಿಪಳ್ಳದ ಕೊಡ್ಡೋಳು ಸಮೀಪ ನಡೆದಿದೆ.

ರಿಕ್ಷಾ ರಸ್ತೆಯಲ್ಲಿ ಚಲಿಸುತ್ತಿರುವ ವೇಳೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ರಿಕ್ಷಾದ ಚಕ್ರಕ್ಕೆ ಸಿಲುಕಿ ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ವೇಳೆ ಸ್ಥಳೀಯ ರಿಕ್ಷಾ ಚಾಲಕ ರಾಮಣ್ಣ ಗೌಡ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಿಕ್ಷಾದಲ್ಲಿದ್ದ ಮಡಂತ್ಯಾರು ಸಮೀಪದ ಮೂವರು ಪ್ರಯಾಣಿಕರಿಗೂ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.