ಬೆಳ್ತಂಗಡಿ : ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಸೇವಾ ಭಾರತಿ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದ್ದು, ಬೆನ್ನುಹುರಿ ಮುರಿತಕ್ಕೊಳಗಾದವರ ಆರೈಕೆಗಾಗಿ ಸೌತಡ್ಕದಲ್ಲಿ ಸೇವಾಧಾಮವನ್ನು ಸ್ಥಾಪಿಸುವ ಮೂಲಕ ಸೂಕ್ತ ರೀತಿಯ ಚಿಕಿತ್ಸೆ, ಮಾಹಿತಿ ಮತ್ತು ತರಭೇತಿಯನ್ನು ನೀಡುತ್ತಾ ಬಂದಿದ್ದು, ಇದೀಗ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಆರೈಕೆಯನ್ನು ಮಾಡುವವರಿಗೆ ಸರಕಾರದಿಂದ ಮಾಶಾಸನ ನೀಡುವಂತೆ ಒತ್ತಾಯಿಸಿ ಜು. 13ರಂದು ಮಂಗಳೂರಿನಲ್ಲಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೇವಾ ಭಾರತಿ ತಂಡದ ಸದಸ್ಯರು ಭೇಟಿ ಮಾಡಿ ಮನವಿಯನ್ನು ನೀಡಿದರು.
ಈ ಸಂದರ್ಭ ಬೆನ್ನುಹುರಿ ಅಪಘಾತಗೊಂಡ ಮಹಿಳೆಯರಿಗಾಗಿ ಉಡುಪಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ೩ ದಿನಗಳ ರಿಹ್ಯಾಬ್ ಮೇಳಕ್ಕೆ ಸಚಿವರನ್ನು ಆಮಂತ್ರಿಸಿದರು.