
ಕೊಕ್ಕಡ: ಅಪರಿಚಿತರು ಎಸೆದು ಹೋಗಿದ್ದ ಸತ್ತ ಕರುವಿನ ಅಂತ್ಯ ಸಂಸ್ಕಾರವನ್ನು ಕೊಕ್ಕಡದ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮಾಡಿರುವ ಘಟನೆ ಜು.15ರಂದು ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಬಳಿ ಯಾರೋ ಅಪರಿಚಿತರು ಸತ್ತ ದನದ ಕರುವೊಂದನ್ನು ಪಕ್ಕದ ಮೋರಿಗೆ ಎಸೆದ ಘಟನೆ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಕೊಕ್ಕಡ ಪಿಡಿಓ ಅವರು ಕರುವಿನ ಅಂತ್ಯ ಸಂಸ್ಕಾರ ಮಾಡುವ ಉದ್ದೇಶದಿಂದ ಕೊಕ್ಕಡದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿಯನ್ನು ನೀಡಿದ್ದು, ತಕ್ಷಣ ಸ್ಪಂದಿಸಿದ ಸಂಘಟನೆಯ ಕಾರ್ಯಕರ್ತರು ಸತ್ತ ಕರುವನ್ನು ಮೋರಿಯಿಂದ ಹೊರತೆಗೆದು ಅಲ್ಲೇ ಸಮೀಪ ಗುಂಡಿ ತೋಡಿ ಶವವನ್ನು ಗುಂಡಿಗೆ ಹಾಕುವ ಕೆಲಸವನ್ನು ಮಾಡಿದ್ದಾರೆ.

ಮೋರಿಯ ಸಮೀಪ ಗಾಡಿಯೊಂದು ನಿಂತ ಕುರುಹುಗಳು ಕಂಡುಬಂದಿದ್ದು, ಸಮೀಪದಲ್ಲೇ ಕಸಾಯಿಖಾನೆಯೂ ಕಾರ್ಯನಿರ್ವಹಿಸುತ್ತಿರುವುದರಿಂದ ಯಾರೋ ಕಿಡಿಗೇಡಿಗಳು ಕಸಾಯಿಖಾನೆಗೆ ತಂದ ಕರು ದಾರಿಮದ್ಯೆ ಸತ್ತಿರುವ ಕಾರಣ ಎಸೆದು ಹೋಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
