ನಾವೂರು: ನಾವೂರಿನ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ನೂತನ ಸಮಿತಿ ರಚನ ಸಭೆಯು ಜು.14ರಂದು ನಾವೂರು ಶಾಲೆಯಲ್ಲಿ ಅಲ್ಲಿನ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕರ ಉಪಸ್ಥಿತಿಯಲ್ಲಿ ನಡೆಯಿತು.
ನೂತನವಾಗಿ ರಚನೆಗೊಂಡ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೆಬಾಸ್ಟಿನ್ ವಿ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ರಜತ್ ಮೋರ್ತಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಬಂಗೇರ ಕಾರಿಂಜ, ಜೊತೆಕಾರ್ಯದರ್ಶಿಯಾಗಿ ಶುಭಕರ್ ಮುಳಿಪಡ್ಪು, ಕೋಶಾಧಿಕಾರಿಯಾಗಿ ಸಲೀಂ ಮುರ, ಉಪಾಧ್ಯಕ್ಷರಾಗಿ ಶ್ಯಾಮಲ ಹಾಗೂ ಸದಸ್ಯರುಗಳಾಗಿ ಧರ್ಣಪ್ಪ ಮೂಲ್ಯ, ಗಣೇಶ್ ನೆಲ್ಲಿಪಲ್ಕೆ, ಸುರೇಶ್ ಪಿ.ಎನ್. ಇಂಚರ, ಜಯಂತ್ ಹೊಡಿಕ್ಕಾರು, ಇಸ್ಮಾಯಿಲ್ ಸಿ.ಎಂ., ಪ್ರವೀಣ್, ಜಲಜ, ವನಿತ ಮತ್ತು ನೆಬಿಸ ಆಯ್ಕೆಯಾಗಿದ್ದಾರೆ.
ನೂತನ ಸಮಿತಿಯು ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದು, ತಮ್ಮ ಅವಧಿಯಲ್ಲಿ ಅದಕ್ಕಾಗಿ ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿದ್ದಾರೆ.