
ಉಜಿರೆ: ಕಲ್ಮಂಜ ಗ್ರಾಮದ ಸತ್ಯನಾರಾಯಣ ಭಜನಾ ಮಂದಿರದ ಬಳಿ ನಿವಾಸಿ ಶ್ರೀಮತಿ ಸರೋಜಾ ರವರ ಮನೆಯ ಗೋಡೆಯು ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದ್ದು ಜು.16ರಂದು ಮನೆಯ ಹಿಂಬಾಗ ಕುಸಿತಕ್ಕೊಳಗಾಗಿತ್ತು.
ಘಟನೆಯ ಬಳಿಕ ಮನೆಯವರು ಶೌರ್ಯ ಘಟಕದ ಸುಧೀರ್ ಎಂಬವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದು, ತುರ್ತಾಗಿ ಸ್ಪಂದನೆ ನೀಡಿದ ಶೌರ್ಯ ಘಟಕದ ಸದಸ್ಯರು ವಲಯದ ಮೇಲ್ವಿಚಾರಕರಾದ ಶ್ರೀಮತಿ ವನಿತಾರವರ ಮಾರ್ಗದರ್ಶನದಂತೆ ಶೌರ್ಯ ಘಟಕದ ಸದಸ್ಯರೆಲ್ಲ ಸೇರಿ ಸ್ಥಳೀಯ ಘಟಕದ ಸದಸ್ಯರಾದ ಶೀಲಾವತಿ ಎಂ.ಕೆ. ರವರ, ಶಾಮಿಯಾನದ ಕೆಲಸದವರ ಜೊತೆಗೂಡಿ ಮನೆಯ ಗೋಡೆಯನ್ನು ಸಂಪೂರ್ಣ ತೆರವುಗೊಳಿಸಿದ ಬಳಿಕ ಹಂಚನ್ನು ಸರಿಪಡಿಸಲಾಗದ ಕಾರಣ ಸಂಪೂರ್ಣ ಮನೆಯ ಮಾಡಿಗೆ ಟರ್ಪಲನ್ನು ಹಾಕಲಾಯಿತು.

ಈ ಸಂದರ್ಭದಲ್ಲಿ ಶೌರ್ಯ ಘಟಕದ ಸದಸ್ಯರಾದ ಸುಧೀರ್, ಅನಿಲ್, ರಾಘವೇಂದ್ರ, ಶಿವಕುಮಾರ್, ನೂತನ ಘಟಕದ ಸದಸ್ಯರಾದ ಶೀಲಾವತಿ, ಸೇವಾ ಪ್ರತಿನಿಧಿ ಪ್ರೇಮಲತಾ, ಪ್ರಮೀಳಾ ಡಿ. ಮೊದಲಾದವರು ಉಪಸ್ಥಿತರಿದ್ದರು.
