
ಬೆಳ್ತಂಗಡಿ: ಕಟ್ಟಡ ಕಾಮಗಾರಿಯ ಕೆಲಸಕ್ಕೆಂದು ಹೊರ ರಾಜ್ಯದಿಂದ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣವನ್ನು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಬಳಿಯ ಕಟ್ಟಡ ಕೆಲಸಕ್ಕೆ ಕಲ್ಕತ್ತಾ ಮೂಲದ ದಂಪತಿಗಳಾದ ಮುಷರಫ್ ಮತ್ತು ರೀಮಾ(24ವ) ಎಂಬವರು ಬಂದಿದ್ದು. ಪತ್ನಿ ರೀಮಾ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಜು.8 ರಂದು ಹೋಗಿದ್ದು ಬಳಿಕ ವಾಪಾಸ್ ಬರದೆ ಇದ್ದ ಬಗ್ಗೆ ಗಂಡ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜು.8 ರಂದು ನಾಪತ್ತೆ ದೂರು ನೀಡಿದ್ದರು.
ಬೆಳ್ತಂಗಡಿ ಪೊಲೀಸರು ನಾಪತ್ತೆ ಪ್ರಕರಣದ ಜಾಡು ಹಿಡಿದು ಟೆಕ್ನಿಕಲ್ ಮಾಹಿತಿ ಆಧಾರದಲ್ಲಿ ಜು.17 ರಂದು ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಮಹಿಳೆಯನ್ನು ಪತ್ತೆ ಮಾಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಗಂಡ ಜೊತೆ ಕಳುಹಿಸಿಕೊಟ್ಟು ಪ್ರಕರಣ ಸುಖಾಂತ್ಯ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ್ ಮತ್ತು ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಸಬ್ ಇನ್ಸ್ಪೆಕ್ಟರ್ ಮುರುಳಿಧರ್ ನಾಯ್ಕ್ ನೇತೃತ್ವದ ಸಿಬ್ಬಂದಿ ಚರಣ್ ರಾಜ್, ಬಸವರಾಜ್, ಬೆನ್ನಿಚ್ಚನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
