
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಜನತೆಗೆ ವಿಶೇಷ ತಿನಿಸುಗಳು ಮತ್ತು ಸಂಗೀತದ ರಸದೌತಣವನ್ನು ಒಟ್ಟೊಟ್ಟಿಗೆ ಉಣಬಡಿಸಲು ಸಿದ್ದವಾಗಿದೆ ಬೋಧಿ ಪ್ರೊಡಕ್ಷಣ್ಸ್. ಇತ್ತೀಚೆಗೆ ದಸ್ಕತ್ ಚಿತ್ರದ ಮೂಲಕ ಯಶಸ್ಸನ್ನು ಕಂಡಿರುವು ಬೋಧಿ ಪ್ರೊಡಕ್ಷಣ್ಸ್ ಇದೀಗ ಬೆಳ್ತಂಗಡಿಯಲ್ಲಿ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು ಬೆಳ್ತಂಗಡಿ ನೈಟ್ಸ್, ಫುಡ್ ಫೆಸ್ಟಿವಲ್ ಮತ್ತು ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ಇದರ ಅಧಿಕೃತ ಸ್ಥಳ ಮತ್ತು ದಿನಾಂಕವನ್ನು ತಂಡವು ಇನ್ನಷ್ಟೇ ಘೋಷಿಸಬೇಕಿದೆ. ಈ ಹೊಸ ಪ್ರಯತ್ನವು ಬೆಳ್ತಂಗಡಿ ತಾಲೂಕಿನ ಖಾದ್ಯಪ್ರಿಯರಲ್ಲಿ ಮತ್ತು ಸಂಗೀತಪ್ರಿಯರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
