ಮರೋಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಮರೋಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ರೂ. 17.00 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಮಾ 07 ರಂದು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯಂತ ಕೋಟ್ಯಾನ್, ಮರೋಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ, ರತ್ನಾಕರ್ ಬುಣ್ಣನ್, ಪದ್ಮಶ್ರೀ ಜೈನ್, ಬಾಲಕೃಷ್ಣ ಬಂಗೇರ, ಪಂಚಾಯತ್ ಮಾಜಿ ಸದಸ್ಯರಾದ ಯಶೋಧ, ಅಶೋಕ್ ಪೂಜಾರಿ, ಧನಲಕ್ಷ್ಮೀ, ಉಮಾವತಿ, ಉಮೇಶ್ ಸಾಲ್ಯಾನ್, ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಜಿತ್ ಪೆರಾಡಿ, ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಪ್ರಮುಖರಾದ ಗಣೇಶ್ ಕರ್ಕೇರ, ಬಾಸ್ಕರ್ ಜೆ ಸಾಲಿಯಾನ್, ದೇವಾರಾಜ್ ಶೆಟ್ಟಿ, ರವಿ ಕುಲಾಲ್, ಸುರೇಂದ್ರ ಬಲ್ಲಾಳ್, ವಾಸು ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಕಾತ್ಯಾಯಿನಿ, ಬಾಲವಿಕಾಸ ಅಧ್ಯಕ್ಷರಾದ ಯಶ್ವಿತಾ, ಇಂಜಿನಿಯರ್, ಇಲಾಖಾ ಅಧಿಕಾರಿಗಳು ಹಾಗೂ ಹಲವಾರು ನಾಗರಿಕರು ಉಪಸ್ಥಿತರಿದ್ದರು.
