
ಬೆಳ್ತಂಗಡಿ: ಬೊಳ್ಳೂರು ಬೈಲಿನಲ್ಲಿ ಕಾಡಾನೆಯು ಕೃಷಿ ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡಿದ ಘಟನೆ ಜು.21ರಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಬೊಳ್ಳೂರು ಬೈಲಿನ ಡೆಮ್ಮ ಜಾಲು ಎಂಬಲ್ಲಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ತೋಟದಲ್ಲಿದ್ದ, ಬಾಳೆ, ತೆಂಗಿನ ಗಿಡ ಸೇರಿದಂತೆ ಅಲ್ಲಲ್ಲಿ ಕೃಷಿಗೆ ಹಾನಿ ಉಂಟು ಮಾಡಿದೆ. ಒಂದು ಕಡೆ ವಿಪರೀತ ಮಳೆಯಿಂದಾಗಿ ರೈತರು ಸಂಕಷ್ಟವನ್ನು ಎದುರಿಸಿದರೆ. ಇನ್ನೊಂದೆಡೆ ಕಾಡಾನೆಗಳ ಹಾವಳಿಯು ಕೃಷಿಕರ ನಿದ್ದೆಗೆಡಿಸಿದೆ.
