
ಬೆಳ್ತಂಗಡಿ: 2023-24ನೇ ಸಾಲಿನಲ್ಲಿ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 8 ಜನ ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ 100 ಶೇಕಡಾ ಅಂಕವನ್ನು ಗಳಿಸಿದ್ದು, ಜು.20ರಂದು ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 30ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಾಣಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಗುರಪ್ರಸಾದ್, ರಕ್ಷಿತ್ ಜಿ, ದೀಪಕ್, ಅನೀಶ್, ಶ್ರೇಯಸ್, ವಿಮಾರ್ಶಾ ಪಿ. ಶೆಟ್ಟಿ, ಸೃಜನ್ಯಾ ಮತ್ತು ಚರಿಷ್ಮಾ ಈ ಸಾಧನೆಯನ್ನು ಮಾಡಿದ್ದು, ಇವರುನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವಿಸಲಾಯಿತು.
ಇನ್ನು ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣರಾದ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ತುಳು ಭಾಷಾ ಶಿಕ್ಷಕಿ ಸಂಧ್ಯಾ ಜೆ.ಪಿ. ಶೆಟ್ಟಿಯವರನ್ನು ತುಳು ಆಕಾಡೆಮಿ 30 ನೇ ವರ್ಷದ ಸಂಭ್ರಮೋತ್ಸವದ ವತಿಯಿಂದ ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ವಾಣಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಬೆಳ್ತಂಗಡಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮದ ಜೊತೆಯಲ್ಲಿ ತುಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಂಸ್ಥೆಯು ಕಳೆದ 7 ವರ್ಷಗಳಿಂದ ತುಳು ಶಿಕ್ಷಣ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ ಪಡೆಯುತ್ತಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿ ಸತತ 3ನೇ ಭಾರಿ ಹಾಗೂ ಈ ಹಿಂದೆ ಪುತ್ತೂರು ತಾಲೂಕಿನ ರಾಮಕುಂಜೇಶ್ವರ ಫ್ರೌಡ ಶಾಲೆಯಲ್ಲಿ 2022-23ನೇ ಸಾಲಿನಲ್ಲಿ ಗೌರವ ಪ್ರಶಸ್ತಿ ಹಾಗೂ ಕೊಯ್ಯೂರು ಫ್ರೌಡ ಶಾಲೆಯಲ್ಲಿ ಆಯೋಜಿಸಿದ ತುಳು ಜಾನಪದ ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳು ಮತ್ತು ತುಳು ಶಿಕ್ಷಕಿಯವರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಾಣಿ ಆಂಗ್ಲ ಮಾಧ್ಯಮ ಫ್ರೌಡ ಶಾಲೆಯಲ್ಲಿ ಕಳೆದ 7 ವರ್ಷಗಳಿಂದ ತುಳು ಶಿಕ್ಷಣ ನೀಡಲು ವಾಣಿ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಹಾಗೂ ಪೋಷಕರ ಪ್ರೋತ್ಸಾಹದಿಂದ ಪ್ರತಿ ವರ್ಷವೂ ಹೆಚ್ಚಿನ ಮಕ್ಕಳು ಶೇಕಡಾ 100 ಆಂಕ ಗಳಿಸುವಂತೆ ತರಬೇತುಗೊಳಿಸಲಾಗುತ್ತಿದೆ.
ಗೇರುಕಟ್ಟೆಯಲ್ಲಿ ದಿನ ಪತ್ರಿಕೆ ಹಾಗೂ ವಾರಪತ್ರಿಕೆ ವಿತರಕರಾದ ಕೊರಂಜ ಜಯಪ್ರಕಾಶ್ ಶೆಟ್ಟಿಯವರ ಧರ್ಮಪತ್ನಿ ಸಂಧ್ಯಾರವರು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ತುಳು ಶಿಕ್ಷಣ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
