ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸ್ವಸ್ತಿ ನಿಲಯದ ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ದಂಪತಿಗಲಾದ ಶ್ರೀಮತಿ ಮೀನಾಕ್ಷಿ ಮತ್ತು ಮಹಾಬಲ ಗೌಡ ಇವರ ಸುಪುತ್ರಿ ಕು.ಪ್ರಾಪ್ತಿ ಎಂ ಗೌಡ ಇವರು ನೃತ್ಯ ಕಲೆ ಹಾಗೂ ಭಾಷಣ ಕಲೆಯಲ್ಲಿ ಸಾಧನೆಯನ್ನು ಮಾಡಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರಾಂಕ್ ಗಳಿಸಿದ್ದು ಇವರ ಈ ಸಾಧನೆಯನ್ನು ಗುರುತಿಸಿ ಟ್ರಸ್ಟ್ ನ ವತಿಯಿಂದ ಗೌರವ ಪೂರ್ವಕ ಅಭಿನಂದನೆಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ರಂಜನ್ ಜಿ ಗೌಡ, ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಗೌಡ ಬೆಳಾಲು, ಉಪಾಧ್ಯಕ್ಷರಾದ ವಸಂತ ಗೌಡ ಮರಕಡ, ಕಾರ್ಯದರ್ಶಿಯಾದ ಭರತ್ ಕುಮಾರ್, ಸ್ಥಾಪಕ ಟ್ರಸ್ಟಿ ನವೀನ್ ಬಿ ಕೆ, ಟ್ರಸ್ಟಿ ದಿನೇಶ್ ಕೊಲೆಂಜಿರೋಡಿ ಮತ್ತು ಮನೆಯವರು ಉಪಸ್ಥಿತರಿದ್ದರು.
ಇತರ ಸುದ್ದಿ, ಬೆಳ್ತಂಗಡಿ, ರಾಜ್ಯ ಸುದ್ದಿ, ಶಿಕ್ಷಣ ಮತ್ತು ಉದ್ಯೋಗ
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಗೌರವ ಸನ್ಮಾನ.
