
ಬೆಳ್ತಂಗಡಿ : ತಿಂಗಳ ಹಿಂದೆ ಬೀದಿ ನಾಯಿ ಕಡಿತಕ್ಕೊಳಗಾಗಿದ್ದ ವೃದ್ಧರೊಬ್ಬರು ರೆಸಿಬ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ನಗರದ ಸುದೆಮುಗೇರು ನಿವಾಸಿ ಸೋಮ (60 ವ) ಎಂಬವರಿಗೆ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ಕಳೆದ ತಿಂಗಳು ಬೀದಿ ನಾಯಿ ಕಚ್ಚಿದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಇದೀಗ ರೆಬಿಸ್ ರೋಗಕ್ಕೆ ತುತ್ತಾಗಿ ಮೇ 12 ರಂದು ಸಂತೆಕಟ್ಟೆ ಭಾರತ್ ಚಿತ್ರಮಂದಿರದ ಪಕ್ಕದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.

ಸೋಮ ಅವರ ಕಾಲಿನಲ್ಲಿ ನಾಯಿ ಕಚ್ಚಿರುವ ಮೂರು ಗಾಯಗಳು ಪತ್ತೆಯಾಗಿದ್ದು. ಅವರು ಬೀದಿ ನಾಯಿ ಕಚ್ಚಿದ ಬಳಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು ಎಂದು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮೃತದೇಹವನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

