ಬೆಳ್ತಂಗಡಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ಉಜಿರೆಯಲ್ಲಿ ಆ.14ರಂದು ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ. 10 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಉಪಾಧ್ಯಕ್ಷ ವೆಂಕಟೇಶ್ ಬೆಲಾಲು, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ಬಜರಂಗದಳ ಪುತ್ತೂರು ಜಿಲ್ಲೆ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ವಿ.ಹಿಂ.ಪ ಬಜರಂಗದಳ ಬೆಳ್ತಂಗಡಿ ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ, ವಿ.ಹಿಂ.ಪ ಬಜರಂಗದಳ ಬೆಳ್ತಂಗಡಿ ಪ್ರಖಂಡ ಬಲೋಪಾಸನಾ ಪ್ರಮುಖ್ ಮನೀಷ್ ಉಜಿರೆ, ವಿಶ್ವ ಹಿಂದೂ ಪರಿಷದ್ ಉಜಿರೆ ಘಟಕ ಉಪಾಧ್ಯಕ್ಷ ಪ್ರಸಾದ್ ಉಜಿರೆ, ಬಜರಂಗದಳ ಮುಂಡತ್ತೋಡಿ ಉಪಖಂಡ ಸಮಿತಿ ಗೋರಕ್ಷಾ ಪ್ರಮುಖ್ ಹೇಮಂತ್ ಉಜಿರೆ, ಉಜಿರೆ ದೇವಸ್ಥಾನ ಮೇನೇಜರ್ ರಾಜಕುಮಾರ್ ಹಾಗೂ ಧರೆಶ್ ಉಜಿರೆ ಉಪಸ್ಥಿತರಿದ್ದರು.


Discover more from Nammura Suddi

Subscribe to get the latest posts sent to your email.

Leave a Reply

You missed