ಬೆಳ್ತಂಗಡಿ: ವಿವಾಹಿತ ಮಹಿಳೆಯ ಖಾಸಗಿ ಕ್ಷಣದ ಎನ್ನಲಾದ ವಿಡಿಯೋ ವೈರಲ್ ಆಗಿರುವ ಬಗ್ಗೆ ವಿವಾಹಿತ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿಯ ವಕೀಲರೊಬ್ಬರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯ ಖಾಸಗಿ ಕ್ಷಣದ ವಿಡಿಯೋವನ್ನು ವೇಣೂರು ಗ್ರಾಮದ ಮೂಡುಕೋಡಿ ನಿವಾಸಿ ನಾರಾಯಣ ಪಂಡಿತ್ ಮಗನಾದ ವಕೀಲ ವೃತ್ತಿ ಮಾಡುತ್ತಿರುವ ಸತೀಶ್ ಎಂಬವರು ಪಡೆದುಕೊಂಡು ಬಳಿಕ ಈತ ವಿಡಿಯೋವನ್ನು ಬೇರೆಯವರಿಗೆ ಕಳುಹಿಸಿ ಇದೀಗ ಎಲ್ಲೆಡೆ ವೈರಲ್ ಆಗಿರುವ ಬಗ್ಗೆ ವಿವಾಹಿತ ಮಹಿಳೆ ವೇಣೂರು ಪೊಲೀಸ್ ಠಾಣೆಗೆ ಸೆ.21 ರಂದು ದೂರು ನೀಡಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸರು INFORMATION TECHNOLOGY ACT 2000, (U/S 66(E),67,67(A)) ಅಡಿಯಲ್ಲಿ ವಕೀಲರಾದ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

Discover more from Nammura Suddi
Subscribe to get the latest posts sent to your email.
