ನಿಡ್ಲೆ : ಸರಕಾರ ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರತಿ ತಿಂಗಳು ಪಡಿತರ ವಿತರಣೆ ಮಾಡುವ ಅಕ್ಕಿಯೂ ಕಳಪೆ ಗುಣಮಟ್ಟದಲ್ಲಿ ಪತ್ತೆಯಾದ ಬಗ್ಗೆ ಆ.19ರಂದು ವಿಡಿಯೋ ಸಮೇತ ನಮ್ಮೂರ ಸುದ್ದಿ ವರದಿ ಮಾಡಿದ ಬೆನ್ನಲ್ಲೇ ಬೆಳ್ತಂಗಡಿ ಆಹಾರ ಇಲಾಖೆಯ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ.

ಅನ್ನಭಾಗ್ಯ ಯೋಜನೆಗೆ 2024ರಲ್ಲಿ ಪ್ಯಾಕ್ ಆದ ಅಕ್ಕಿ..? ಪಡಿತರ ಅಂಗಡಿಗೆ ಬಂದ ಅಕ್ಕಿಯಲ್ಲಿ ಹುಳ, ಕೀಟ, ಬಟ್ಟೆ ತುಂಡು..

ಬೆಳ್ತಂಗಡಿ ಆಹಾರ ಇಲಾಖೆ ಆಹಾರ ಶಿರಸ್ಥೆದಾರ್ ಸಂತೋಷ್ ಮತ್ತು ಆಹಾರ ನಿರೀಕ್ಷಕರು ವಿಶ್ವ ಕೆ. ಆ.20 ರಂದು ನಿಡ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಂಘ ನಿಡ್ಲೆ ಶಾಖೆಯಲ್ಲಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಂಗಳೂರು (FCI) ಭಾರತೀಯ ಆಹಾರ ನಿಗಮ ಗೋಡೌನಿಂದ ಬಂದ ಅಕ್ಕಿಗಳ ಲೋಡಿನಲ್ಲಿ ಕೆಲವೊಂದು ಚೀಲದಲ್ಲಿ ಕಳಪೆ ಗುಣಮಟ್ಟದ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿಯನ್ನು ವಿತರಿಸದಂತೆ ಸೂಚನೆ ನೀಡಿದ ಅಧಿಕಾರಿಗಳು.
ಈ ಬಗ್ಗೆ ಮಹಜರು ಮಾಡಿ ಮಂಗಳೂರು ಆಹಾರ ನಾಗರಿಕರ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಹೇಮಾಲತಾ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading