
ಕಲ್ಮಂಜ : ಸೆ. 9 ರಂದು ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಕಲ್ಮಂಜ, ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಬೆಳ್ತಂಗಡಿ ಮತ್ತು ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಲ್ಮಂಜ ಸಹಯೋಗದೊಂದಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮ ನಡೆಯಿತು. ಸುಮಾರು 80 ನಾಯಿಗಳಿಗೆ ಉಚಿತ ಲಸಿಕೆ ನೀಡಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯತ್ ಕಲ್ಮಂಜ ಅಧ್ಯಕ್ಷರಾದ ಶ್ರೀಮತಿ ವಿಮಲಾ ಗೌಡ, ಸದಸ್ಯರಾದ ರಾಧಾಕೃಷ್ಣ ಗೌಡ, ಪಶು ಪಾಲನಾ ಇಲಾಖೆಯ ಜಾನುವಾರು ಅಧಿಕಾರಿ ನಾಗಶಯನ ರಾವ್, ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್ ಕಲ್ಮಂಜ, ಅಧ್ಯಕ್ಷರಾದ ರಮೇಶ್ ಗೌಡ, ಉಪಾಧ್ಯಕ್ಷರಾದ ಸೂರ್ಯನಾರಾಯಣ ಹೊಳ್ಳ, ನಿರ್ದೇಶಕರಾದ ದೇಜಪ್ಪ ಪೂಜಾರಿ, ಸಹಾಯಕಿ ಶ್ರೀಮತಿ ಸಂಧ್ಯಾ, ಹಿರಿಯರಾದ ರವಿ ಭಟ್, ಪಶುಶಖಿ ಶ್ರೀಮತಿ ಮಮತಾ ಹಾಗೂ ಸ್ಥಳೀಯರು ಜೊತೆಗಿದ್ದರು.

Discover more from Nammura Suddi
Subscribe to get the latest posts sent to your email.
