ಗುರಿಪಳ್ಳ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿಯುವ ಭೀತಿಯಲ್ಲಿರುವ ಗುರಿಪಳ್ಳದ ಸುರೇಶ್ ಮುಗೇರ ಇವರ ಮನೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ನೇತೃತ್ವದ ಭಾರತ್ ಜೋಡೋ ಟಾಸ್ಕ್ ಫೋರ್ಸ್ ತಂಡ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ಮನೆಗೆ ತುರ್ತು ವ್ಯವಸ್ಥೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳಾದ ಮರದ ಬಾಗಿಲು, ಸಿಮೆಂಟ್, ಮರಳು, ಟಾರ್ಪಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿದರು.
ಇವರ ಮನೆಗೆ ರಾಜ್ಯ ಸರಕಾರದಿಂದ ಬಿಡುಗಡೆ ಗೊಳ್ಳಬೇಕಾಗಿರುವ ಅನುದಾನವನ್ನು ಅತೀ ಶೀಘ್ರದಲ್ಲಿ ಒದಗಿಸುವಲ್ಲಿ ಸಹಕರಿಸುವ ಭರವಸೆ ನೀಡಿದರು.
Discover more from Nammura Suddi
Subscribe to get the latest posts sent to your email.
