ಬೆಳ್ತಂಗಡಿ : ಭಾರತಾಂಬೆಯ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡು 22 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಾದ ಬೆಂಗಳೂರು, ಜಮ್ಮು, ಪಟ್ನಾಕೋಟ್, ಕೊಲ್ಕತ್ತ, ಅಸ್ಸಾಂ, ರಾಜಸ್ತಾನ ಮತ್ತು ಪುಣೆಯಲ್ಲಿ ನಿಷ್ಠೆ ಮತ್ತು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಇದೀಗ ನಿವೃತ್ತಿ ಹೊಂದಿ ಅ. 3 ರಂದು ತನ್ನ ಹುಟ್ಟೂರಿಗೆ ಆಗಮಿಸಿದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಹೆಮ್ಮೆಯ ಯೋಧ ನಾಯಕ್ | ಅಶೋಕ ಕುಮಾರ್ ಅವರಿಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಇದರ ಯುವ ವೇದಿಕೆಯ ವತಿಯಿಂದ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆಯವರು ಹಾರಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಈ ಸಂಧರ್ಭ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ತಾಲೂಕು ಮಹಿಳಾ ವೇದಿಕೆಯ ಜೊತೆಕಾರ್ಯದರ್ಶಿ ಮೀನಾಕ್ಷಿ ಮಹಾಬಲ ಗೌಡ, ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಜೊತೆ ಕಾರ್ಯದರ್ಶಿ ತೀಕ್ಷಿತ್ ದಿಡುಪೆ, ಉಪಾಧ್ಯಕ್ಷ ನಿತಿನ್ ಗೌಡ ಕಲ್ಮಂಜ, ಕಾನೂನು ಸಲಹೆಗಾರ ನವೀನ್ ನಿಡ್ಲೆ, ಪ್ರದೀಪ್ ನಾಗಾಜೆ, ಮೊದಲಾದವರು ಉಪಸ್ಥಿತರಿದ್ದರು.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading