
ಬೆಳ್ತಂಗಡಿ : ಮಾ.06: ಬಜೆಟ್ ಭಾಷಣದ ಆರಂಭದ ಮುನ್ನುಡಿಯಲ್ಲೇ ಕೇಂದ್ರ ಸರಕಾರವನ್ನು ಟೀಕಿಸಿ ಒಕ್ಕೂಟ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದ ಕರ್ನಾಟಕ ಕಾಂಗ್ರೆಸ್ ಸರಕಾರದ ಮುಂಗಡ ಪತ್ರ ನಿರೀಕ್ಷೆಗೆ ನಿರಾಸೆ ತಂದ ಸತ್ವಹೀನ ಬಜೆಟ್ ಆಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಜಿ.ಎಸ್.ಟಿ. ಉತ್ತಮ ಮಟ್ಟದಲ್ಲಿ ಸಂಗ್ರಹವಾಗಿದ್ದು ಸಹಜವಾಗಿ ಶಾಸನಬದ್ದವಾಗಿ ರಾಜ್ಯದ ಪಾಲಿಗೆ ಹೆಚ್ಚಿನ ಸಂಪನ್ಮೂಲ ಲಭ್ಯವಾಗಿದ್ದು ಅಸಮರ್ಪಕ ಆಡಳಿತ ನೀತಿಯಿಂದ ರಾಜಸ್ವ ಕೊರತೆಯುಂಟಾಗಿ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿರುವ ಹೇರಳ ಸಾಲದಿಂದ ವಿತ್ತೀಯ ಕೊರತೆ ಸಾಲ ಹಾಗೂ ಸಾಲದ ಬಡ್ಡಿ ಮರುಪಾವತಿ ಸೇರಿದಂತೆ ಶ್ರೀ ಸಾಮಾನ್ಯನಿಗೆ ಹೊರೆಯಾಗಲಿದೆ.
ಕೃಷಿ ತೋಟಗಾರಿಕೆ ಸಹಕಾರ ಪಶುಸಂಗೋಪನೆ ಆರೋಗ್ಯ ವಲಯ ಒಳಗೊಂಡಂತೆ ಕರಾವಳಿ ಜನತೆಗೆ ಸಂಪೂರ್ಣ ನಿರಾಸೆ ತಂದ ಮುಂಗಡ ಪತ್ರ ಇದಾಗಿದೆಯೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Discover more from Nammura Suddi
Subscribe to get the latest posts sent to your email.
