ಮಚ್ಚಿನ: ಗ್ರಾಮದ ಪುಂಚಪಾದೆ ಸಮೀಪದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು ಈ ಹಿನ್ನಲೆ ಸ್ಥಳೀಯರ ಮಾಹಿತಿಯಂತೆ ಆ.23ರಂದು ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಆ.22 ರಂದು ಸಂಜೆ 6.30ರ ಸುಮಾರಿಗೆ ಬಂಡೆಕಲ್ಲಿನ ಮೇಲೆ ಹುಲಿ ಕುಳಿತಿರುವುದು ಸ್ಥಳೀಯರಿಗೆ ಕಂಡುಬಂದಿದ್ದು ತಕ್ಷಣ ಅವರು ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆ.23 ರಂದು ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಪಡೆದು ಮೊಬೈಲ್ ವಿಡಿಯೊಗಳನ್ನು ಪರಿಶೀಲಿಸಿ, ಸಾಮಾನ್ಯವಾಗಿ ಹುಲಿಗಳು ಇಲ್ಲಿನ ಕಾಡಿನಲ್ಲಿ ವಾಸಿಸುವುದಿಲ್ಲ. ಆದರೂ ದೇವರಪಲ್ಕೆಯಿಂದ ಪಿಲಿಗೂಡು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಮತ್ತೊಮ್ಮೆ ಹುಲಿ ಕಂಡು ಬಂದರೆ ಬೋನು ಇರಿಸಲಾಗುವುದು ಎಂದಿದ್ದಾರೆ.
ಸ್ಥಳೀಯರಾದ ಸಂಕು, ಸಚಿನ್, ಚಂದಪ್ಪ, ವಿನಯ್ ಕುಮಾರ್, ಗಿರೀಶ್, ದಾಮೋದರ, ಸೃಜನ್, ರಂಜಿತ್ ಗೌಡ, ಪೂಜಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು.


Discover more from Nammura Suddi

Subscribe to get the latest posts sent to your email.

Leave a Reply

You missed