ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ವತಿಯಿಂದ ಸಮುದಾಯ ಭವನದ ಅನುದಾನದ ವಿಚಾರವಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರನ್ನು ನ.24ರಂದು ಭೇಟಿ ಮಾಡಲಾಯಿತು.
ಈ ಹಿಂದೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನಕ್ಕೆ ಅನುದಾನವನ್ನು ನೀಡುವುದಾಗಿ ಶಾಸಕರು ವಾಗ್ದಾನವನ್ನು ನೀಡಿದ್ದು, ಅದರಂತೆ ಇದೀಗ ವಿಶೇಷ ಅನುದಾನದಲ್ಲಿ 1 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸುವುದಾಗಿ ತಿಳಿಸಿದರು. ಕೆಲವೇ ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು, ಶೀಘ್ರವಾಗಿ ಅನುದಾನ ಸಂಘದ ಕೈಸೇರುವ ನಿರೀಕ್ಷೆಯಿದೆ. ಈ ಸಂದರ್ಭ ಅನುದಾನವನ್ನು ತರುವಲ್ಲಿ ಪ್ರಯತ್ನಿಸುತ್ತಿರುವ ಶಾಸಕ ಹರೀಶ್ ಪೂಂಜರಿಗೆ ಸಂಘದ ಮುಖಂಡರು ಧನ್ಯವಾದವನ್ನು ತಿಳಿಸಿದರು.
ಶಾಸಕರ ಭೇಟಿಯ ವೇಳೆ ಗೌಡರಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷರಾದ ಹೆಚ್. ಪದ್ಮ ಗೌಡ ಬೆಳಾಲು, ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಗೌಡ ನಡ, ನಿರ್ದೇಶಕರುಗಳಾದ ಜಯಾನಂದ ಗೌಡ, ಸುನಿಲ್ ಗೌಡ ಅನಾವು, ಮಾಧವ ಗೌಡ ಬೆಳ್ತಂಗಡಿ, ವಸಂತ ಗೌಡ ನಡ, ದಿನೇಶ್ ಗೌಡ ಕೊಯ್ಯೂರು, ಯುವ ವೇದಿಕೆಯ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ, ಉಪಾಧ್ಯಕ್ಷ ನಿತಿನ್ ಗೌಡ ಕಲ್ಮಂಜ, ಸದಸ್ಯರಾದ ಪ್ರದೀಪ್ ನಾಗಾಜೆ ನಾವೂರು, ಭರತ್ ಗೌಡ ಮತ್ತು ಕಣಿಯೂರು ಶಕ್ತಿ ಕೇದ್ರದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮೊಗ್ರು ಉಪಸ್ಥಿತರಿದ್ದರು.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading