ಬೆಳ್ತಂಗಡಿ : ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಹಾಗೂ ಬಂಟ್ವಾಳ ವಿಭಾಗ ಸಾರಿಗೆ ಇಲಾಖೆ ಜಂಟಿಯಾಗಿ ಆ. 6 ರಂದು ಶಾಲಾ ವಾಹನಗಳ ತಪಸಾಣೆ ನಡೆಸಿದ ಬಗ್ಗೆ ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 73ರ ಬೆಳ್ತಂಗಡಿ ಮತ್ತು ಉಜಿರೆ ಭಾಗದಲ್ಲಿ ವಾಹನಗಳ ತಪಾಸಣೆ ನಡೆಸಿದ ಅಧಿಕಾರಿಗಳು ಶಾಲಾ ವಾಹನಗಳ ಸರ್ಮಪಕ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಇದಾಗಿಯೂ ಚಾಲಕರಿಗೆ ಸುರಕ್ಷತೆ, ವಾಹನಗಳ ಪಿಟ್ನೆಸ್, ಸಂಚಾರ ನಿಯಮಗಳು ಬಗ್ಗೆ ಮಾಹಿತಿಯನ್ನು ವಿವರಿಸಿದರು.
ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ. ತಂಡ ಮತ್ತು ಬಂಟ್ವಾಳ ಸಾರಿಗೆ ಇಲಾಖೆ ಇನ್ಸ್ಪೆಕ್ಟರ್ ಪ್ರಮೋದ್ ಭಟ್ ತಂಡ ಉಪಸ್ಥಿತರಿದ್ದರು.
Discover more from Nammura Suddi
Subscribe to get the latest posts sent to your email.

