
ಬೆಳ್ತಂಗಡಿ : ತುರ್ತು ಸೇವೆಗೆ ಹೆಸರಾಗಿರುವ ರಾಜ ಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಸಂಘಟನೆಯು ಯುವಕರಿಗೆ ಸತತ ಪ್ರೇರಣೆ ನೀಡುವ ಮೂಲಕ 12,753 ಯುವಕರಿಂದ ರಕ್ತದಾನ ಮಾಡಿಸಿದ ಹೆಮ್ಮೆಯನ್ನು ಹೊಂದಿದ್ದು, ಇದೀಗ ಸಂಗಟನೆಯ 548 ನೇ ಸೇವಾ ಯೋಜನೆಯಾಗಿ ಪ್ರಾದೇಶಿಕ ರಕ್ತಪೂರ್ಣ ಕೇಂದ್ರ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ಆ.11ರಂದು ಬೃಹತ್ ರಕ್ತದಾನ ಶಿಬಿರವು ಮುಗುಳಿ ಶಾಲಾ ವಠಾರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಕೇಸರಿ ಸಂಘಟನೆಯ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಂದೀಪ್ ಬೆಳ್ತಂಗಡಿ ಇವರು ವಹಿಸಲಿದ್ದು. ಸಭಾಧ್ಯಕ್ಷತೆಯನ್ನು ಮುಗಳಿ ನಾರಾಯಣರಾವ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಈ ಸಂದರ್ಭದಲ್ಲಿ ತುಳು ಚಲನಚಿತ್ರ ನಟ ಮತ್ತು ನಟಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬಟ್ಟಲು ವಿತರಣೆ, ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳಿದ ಮಕ್ಕಳಿಗೆ ಸನ್ಮಾನ ಮತ್ತು ಊರ ಸಾಧಕರಿಗೆ ಸನ್ಮಾನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು. ಅಮೂಲ್ಯವಾದ ರಕ್ತವನ್ನು ದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.
Discover more from Nammura Suddi
Subscribe to get the latest posts sent to your email.
