ಬೆಳ್ತಂಗಡಿ: ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ಜು. 26ರಂದು ದೇವಸ್ಥಾನದ ಆವರಣದಲ್ಲಿ ದರ್ಣಪ್ಪ ಮೂಲ್ಯ ನಾವೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಸತೀಶ್ ಗೌಡ ಚೌಕದಕಟ್ಟೆ, ಉಪಾಧ್ಯಕ್ಷರುಗಳಾಗಿ ಸಂತೋಷ್ ಗೌಡ ಕೊಯಮಜಲು, ನಾರಾಯಣ ಗೌಡ ಕುಂಡಡ್ಕ, ಕೊರಗಪ್ಪ ಗೌಡ ಎಟ್ಟಿಬೆಟ್ಟು, ಕೆ. ದೇಜಪ್ಪ ಗೌಡ ಕೆರೆಕೊಡಿ ಕಜೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗೌಡ ನಾಗಾಜೆ, ಕಾರ್ಯದರ್ಶಿಗಳಾಗಿ ಪ್ರಶಾಂತ್ ಉಂಬೇಜೆ, ಸುಂದರ ಎ ಇಂದಬೆಟ್ಟು, ಹರಿಕಿರಣ್ ಯು. ಪ್ರಭು ಮತ್ತು ಕೋಶಾಧಿಕಾರಿಯಾಗಿ ಸಂತೋಷ್ ಎಂ. ಬೆದ್ರಬೆಟ್ಟು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಕಾಂಜಾನು, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಹಿರಿಯರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ವಸಂತ ಗೌಡ ಕಲ್ಲಾಜೆ, ನಾರಾಯಣ ಟೈಲರ್ ಇಂದಬೆಟ್ಟು, ದರ್ಣಪ್ಪ ಗೌಡ ಬೆದ್ರಬೆಟ್ಟು, ಗಣೇಶ್ ಗೌಡ ನಾವೂರು, ವಿನೋದ್ ಪ್ರಸಾದ್ ಕಲ್ಲಾಜೆ, ಅವಿನಾಶ್ ಸೋಮಯ್ಯದಡ್ಡು ಉಪಸ್ಥಿತರಿದ್ದರು.

Discover more from Nammura Suddi
Subscribe to get the latest posts sent to your email.
