ಬೆಳ್ತಂಗಡಿ: ಕಳೆದ 10 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಬೆಳ್ತಂಗಡಿ ತಾಲೂಕಿನ ವೀರ ಕೇಸರಿ ತಂಡವು ಜು. 28ರಂದು ಮಂಗಳೂರಿನ ಕಂಬಳ ಪದವು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಒಟ್ಟು 6 ಕುಟುಂಬಗಳಿಗೆ ಧನಸಹಾಯವನ್ನು ಮಾಡುವ ಮೂಲಕ 10 ವರ್ಷ 2 ತಿಂಗಳುಗಳ ಪಯಣದಲ್ಲಿ 210 ಸೇವಾ ಯೋಜನೆಗಳನ್ನು ಪೂರ್ಣಗೊಳಿಸಿತು.
205ನೇ ಸೇವಾಯೋಜನೆ : ಬಂಟ್ವಾಳ ತಾಲೂಕಿನ ಕುಂದಡ್ಕ ಶೆಡ್ಡುಮನೆ ನಿವಾಸಿ ಬಾಬು ಬಂಗೇರ ಇವರ ಪುತ್ರ ಜೀವನ್ ಕೆ.ಎಸ್. ಇವರು ದ್ವಿತೀಯ ಪಿ.ಯು.ಸಿ. ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂಗಳನ್ನು ಹಸ್ತಾಂತರಿಸಲಾಯಿತು.
206ನೇ ಸೇವಾಯೋಜನೆ : ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರ ನಿವಾಸಿ ಪಲ್ಲವಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯನ್ನು ಮಾಡುತಿದ್ದು ಇವರ ಮುಂದಿನ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂಗಳನ್ನು ಹಸ್ತಾಂತರಿಸಲಾಯಿತು.
207ನೇ ಸೇವಾಯೋಜನೆ : ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಕೊಡಲೂರು ನಿವಾಸಿ ಅನಿತಾ ಇವರ ಪತಿ ಗಣೇಶ್ ಇವರು ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ 10 ಸಾವಿರ ರೂಗಳನ್ನು ಹಸ್ತಾಂತರಿಸಲಾಯಿತು
208ನೇ ಸೇವಾಯೋಜನೆ : ಪಾವೂರು ಇನೋಳಿ ಮಾವೂರ್ ನಿವಾಸಿ ಪ್ರತೀಕ್ಷಾ ನಿವಾಸಿ ಪ್ರಥಮ ವರ್ಷದ ಇಂಜಿನಿಯರಿಂಗ್ ಪದವಿಯನ್ನು ಮಾಡುತಿದ್ದು ಇವರ ವಿದ್ಯಾಭ್ಯಾಸದ ಶುಲ್ಕಕ್ಕಾಗಿ 10 ಸಾವಿರ ರೂಗಳನ್ನು ಹಸ್ತಾಂತರಿಸಲಾಯಿತು
209ನೇ ಸೇವಾಯೋಜನೆ : ಮಂಗಳೂರು ತಾಲೂಕಿನ ಕುಂಪಲ ಸುರಕ್ಷಾನಗರ ನಿವಾಸಿ ಪ್ರಥ್ವಿಶ್ ಇವರು ದ್ವೀತಿಯ ಪಿಯುಸಿಯನ್ನು ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂಗಳನ್ನು ಹಸ್ತಾಂತರಿಸಲಾಯಿತು
210ನೇ ಸೇವಾಯೋಜನೆ : ತಾಲೂಕಿನ ಮೇಲಂತಬೆಟ್ಟು, ಮುಂಡೂರು ನಿವಾಸಿ ಪ್ರಣಮ್ ಇವರು ದ್ವಿತೀಯ ಪಿಯುಸಿಯನ್ನು ಪೂರ್ಣಗೊಳಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂಗಳನ್ನು ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಉದ್ಯಮಿ ಹಾಗೂ ಧಾರ್ಮಿಕ ಮುಂಖಡರಾದ ಶ್ರೀಧರ್ ಶೆಟ್ಟಿ ಕಂಬಳ ಪದವು, ಕಾವೂರಿನ ಲಯನ್ಸ್ ಕಬ್ಲ್ ಮಾಜಿ ಅಧ್ಯಕ್ಷರಾದ ರಾಕೇಶ್ ಶೆಟ್ಟಿ, ಉದ್ಯಮಿಗಳಾದ ಗಣೇಶ್ ಕಂಬಳ ಪದವು, ಪ್ರಸಾದ್ ಭಂಗ ಕಂಬಳ ಪದವು, ವಿರಕೇಸರಿ ಬೆಳ್ತಂಗಡಿ ಸಂಚಾಲಕ ಸತೀಶ್ ಶೆಟ್ಟಿ, ವೀರಕೇಸರಿ ಬೆಳ್ತಂಗಡಿ ಸಂಘಟಕ ಪದ್ಮನಾಭ ಪೂಜಾರಿ, ಸದಸ್ಯರುಗಳಾದ ಪ್ರಜ್ವಲ್ ಕುಮಾರ್, ಪ್ರವೀಣ್ ಇನೋಳಿ ಮೊದಲಾದವರು ಭಾಗವಹಿಸಿದ್ದರು.
Discover more from Nammura Suddi
Subscribe to get the latest posts sent to your email.
