ಬಂದಾರು : ಜು. 19 ರಂದು ರಾತ್ರಿ ಸುರಿದ ವಿಪರೀತ ಮಳೆಗೆ ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಘಟನಾ ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ, ಪಂಚಾಯತ್ ಸದಸ್ಯರಾದ ಚೇತನ್ ಭೇಟಿ ನೀಡಿದ್ದಾರೆ.
ತೆರವು ಕಾರ್ಯಾಚರಣೆಗೆ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು ಕೆಲವೇ ಸಮಯದಲ್ಲಿ ಮಣ್ಣು ತೆರವು ಕಾರ್ಯಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಮಣ್ಣು ತೆರವು ಕಾರ್ಯ ಪೂರ್ಣಗೊಳ್ಳುವವರೆಗೆ ಬಂದಾರು -ಕುಂಟಾಲಪಲ್ಕೆ -ಪೆರ್ಲ ಬೈಪಾಡಿ ಸಂಚರಿಸುವ ಪ್ರತಿಯೊಂದು ವಾಹನಗಳು ಮೈರೋಳ್ತಡ್ಕ -ಶಿವನಗರ – ಪೆರ್ಲಬೈಪಾಡಿ ಮಾರ್ಗವಾಗಿ ಸಂಚರಿಸಲು ತಿಳಿಸಲಾಗಿದೆ.

ಈ ರಸ್ತೆ ಸಂಪೂರ್ಣ ಬಂದ್ ಆಗಿರುವ ಬಗ್ಗೆ ಬಂದಾರು ಗ್ರಾಮ ಪಂಚಾಯತ್ ನಿಂದ ಬಂದಾರು ಹಾಗೂ ಪೆರ್ಲ ಬೈಪಾಡಿಯಲ್ಲಿ ಪ್ರಕಟಣೆಯ ಬ್ಯಾನರ್ ಅಳವಡಿಸಲಾಗಿದ್ದು, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್, ಅನಿತಾ, ಭಾರತಿ ಸ್ಥಳದಲ್ಲಿದ್ದು, ಸೂಕ್ತ ವ್ಯವಸ್ಥೆಯನ್ನು ಮಾಡುವಲ್ಲಿ ಸಹಕರಿಸುತ್ತಿದ್ದಾರೆ.

Leave a Reply

Discover more from Nammura Suddi

Subscribe now to keep reading and get access to the full archive.

Continue reading