ಇಂದಬೆಟ್ಟು: ನವಭಾರತ್ ಗೆಳೆಯರ ಬಳಗ(ರಿ) ಕಲ್ಲಾಜೆ, ಇಂದಬೆಟ್ಟು. ವತಿಯಿಂದ ಪ್ರತಿವರ್ಷದಂತೆ ಈ ವರ್ಷ ಕೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಜೆಯ ಒಂದನೇ ತರಗತಿ ಸೇರಿದ ಮಕ್ಕಳಿಗೆ ನವಭಾರತ್ ವಿದ್ಯಾನಿಧಿಯನ್ನು ವಿತರಿಸಲಾಗಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿ ವಿದ್ಯಾರ್ಥಿಗಳಿಗೂ 2 ಸಾವಿರ ರೂಪಾಯಿಯಂತೆ ವಿದ್ಯಾನಿಧಿಯನ್ನು ವಿತರಿಸಲಾಯಿತು.
ಈ ವೇಳೆ ನವಭಾರತ್ ಗೆಳೆಯರ ಬಳಗ ಅಧ್ಯಕ್ಷರಾದ ಯತೀಶ್ ನೆರಲ್ದಪಲ್ಕೆ, ಕಾರ್ಯದರ್ಶಿ ಅವಿನಾಶ್ ಕಲ್ಲಾಜೆ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.