
ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರು, ಕೊಡಿಯಾಲ್ ಬೈಲ್ ಸ.ಹಿ.ಪ್ರಾ ಶಾಲಾ ಶಾಲಾಭಿವೃದ್ಧಿ ಸಮಿತಿ ನಾಮನಿರ್ದೇಶಕರಾದ ಶ್ರೀಮತಿ ರತ್ನಾವತಿ ಬಾಲಕೃಷ್ಣ ಗೌಡ ಮಾವಿನಕಟ್ಟೆ ಹಾಗೂ S.K.D.R.P ಒಕ್ಕೂಟ ಕಾನರ್ಪ ಇದರ ಸಹಯೋಗದೊಂದಿಗೆ ರೂ.26,000/- ವೆಚ್ಚದಲ್ಲಿ ಸ.ಹಿ.ಪ್ರಾ.ಶಾಲೆ ಕೊಡಿಯಾಲಬೈಲ್ ಶಾಲೆಗೆ ಸುಸಜ್ಜಿತವಾದ ಕೈ ತೊಳೆಯುವ ನೀರಿನ ಘಟಕವನ್ನು ಕೊಡುಗೆಯಾಗಿ ನಿರ್ಮಿಸಿ ಕೊಡಲಾಯಿತು.

ಈ ನೀರಿನ ಘಟಕವನ್ನು ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರತ್ನಾವತಿ ಬಾಲಕೃಷ್ಣ ಗೌಡ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಪಟವರ್ಧನ್ ಕೋಡಿ, ಬಾಲಕೃಷ್ಣ ಗೌಡ ಮಾವಿನಕಟ್ಟೆ, ಮಹೇಶ್ ಕೌಡಂಗೆ ಶಾಲಾ ಮುಖ್ಯೋಪಾಧ್ಯಯರಾದ ಫಿಲೋಮಿನಾ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

