ಬೆಳ್ತಂಗಡಿ : ಮೂವರು ಯುವತಿಯರನ್ನು ಜಲಪಾತ ವೀಕ್ಷಣೆಗೆಂದು ಮೇ 20 ರಂದು ಸಂಜೆ ಕರೆತಂದು ಬಳಿಕ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಕೇರಳಂ ರಾಜ್ಯದ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಫ್ (36 ವ), ಫೈಜಲ್ ಅದಿಲ್ (27 ವ) ಹಾಗೂ ಉಸ್ಮಾನ್ ಸಾಲೀಂ (18 ವ) ಎಂಬ ಮೂವರು ಯುವಕರನ್ನು ಮೇ 20 ರಂದು ರಾತ್ರಿ ಬೆಳ್ತಂಗಡಿ ಪೋಲಿಸರು ಬಂಧಿಸಿದ್ದು, ಮೇ 21 ರಂದು ಸಂಜೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಸಾಣೆಗೆ ಒಳಪಡಿಸಿ ಬಳಿಕ ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನಾಯ್ಯಾಧೀಶರಾದ ವಿಜೇಯೆಂದ್ರ ಟಿ.ಹೆಚ್. ಅವರ ಮುಂದೆ ಹಾಜರು ಪಡಿಸಲಾಗಿದ್ದು ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ನಡುವೆ ಮೂವರು ನೊಂದ ಸಂತ್ರಸ್ತ ಯುವತಿಯರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಮೇ 21 ರಂದು ಕರೆದುಕೊಂಡು ಹೋಗಿ ಮಧ್ಯಾಹ್ನದಿಂದ ಸಂಜೆಯವರೆಗೆ BNS 183 ಹೇಳಿಕೆ ದಾಖಲಿಸಲಾಗಿದೆ.

Leave a Reply

Discover more from Nammura Suddi

Subscribe now to keep reading and get access to the full archive.

Continue reading