ಮೂಡುಬಿದ್ರಿ: ದ ಯೆನೆಪೋಯ ಕಾಲೇಜು ತೋಡಾರು ಇಲ್ಲಿನ 2026-27ನೇ ಸಾಲಿನ ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಜುಲೈ 20ರಂದು ಹಮ್ಮಿಕೊಳ್ಳಲಾಗಿತ್ತು.
ಮೂಡುಬಿದ್ರಿಯ ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಾಧಿಕಾರಿ ಹಾಗೂ ಶಿಕ್ಷಣತಜ್ಞರಾಗಿರುವ ಡಾ. ಮೆಲ್ವಿನ್ ಡಿ’ಸೋಜಾರವರು ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕೌಶಲ್ಯಗಳ ವೃದ್ಧಿಯಿಂದ ಯಶಸ್ಸು ಸಾಧ್ಯವಾಗುತ್ತದೆ ಎಂಬ ವಿಷಯದ ಕುರಿತು ಮಾಹಿತಿಯನ್ನು ನೀಡಿ, ವೃತ್ತಿಪರ ಶಿಕ್ಷಣದಲ್ಲಿ ಮೊದಲ ಆದ್ಯತೆ ಕೌಶಲ್ಯ ವೃದ್ಧಿಗೆ ನೀಡಬೇಕು ಅದು, ಸತತ ಅಭ್ಯಾಸ ಬಲದಿಂದ ದೊರೆಯುತ್ತದೆ. ಜವಾಬ್ದಾರಿಯುತ ವಿದ್ಯಾರ್ಥಿ ಜೀವನವು ಬದುಕಿನ ಯಶಸ್ಸಿಗೆ ಸಹಕಾರಿಯಾಗುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮೊಹಮ್ಮದ್ ಬಿ. ಶಾಹಿದ್ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ರೋಶನ್ ಮೆಲ್ವಿನ್ ಡಿ’ಸೋಜಾರವರು ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕರಾದ ಪ್ರೊ. ದೇವಿಕಾ ಆಶಯ ಗೀತೆಯನ್ನು ಹಾಡಿದರು. ಪ್ರೊ. ಶಾಹದ್ ಪರ್ವೀನ್ ನಿರೂಪಿಸಿ, ಪ್ರೊ. ಅಶ್ವಿನಿ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಪ್ರೊ. ಫಸ್ನಾರವರು ವಂದಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

