ಬೆಳ್ತಂಗಡಿ: ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ಇವರ ವತಿಯಿಂದ ಶಾಸಕ ಹರೀಶ್ ಪೂಂಜರವರ ಮಾರ್ಗದರ್ಶನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆಯುವ ಎರಡನೇ ವರ್ಷದ ಊದುಪೂಜೆ ಹಾಗೂ ಪಿಲಿನಲಿಕೆ ಕಾರ್ಯಕ್ರಮದ ಲೋಗೋ ಹಾಗೂ ಆಮಂತ್ರಣ ಪತ್ರಿಕೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟರವರು ಹಾಗೂ ಶಾಸಕ ಹರೀಶ್ ಪೂಂಜರವರು ಸೆ.30 ರಂದು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ಅಕ್ಟೋಬರ್ 15 ರಂದು ಊದು ಪೂಜೆ ಹಾಗೂ 16ರಂದು ಪಿಲಿನಲಿಕೆಯು ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆಯಲಿದೆ.ಆಮಂತ್ರಣ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಸಹ ಪ್ರಭಾರಿಗಳಾದ ಜಯಂತ್ ಕೋಟ್ಯಾನ್ ಮರೋಡಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ರಾಜೇಶ್ ಪ್ರಭು, ಬಿ.ಎಂ.ಎಸ್. ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್, ವೇಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಸುಂದರ್ ಹೆಗ್ಡೆ, ಬಿಜೆಪಿ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಸಾವ್ಯ, ಸದಸ್ಯರಾದ ಪ್ರಸಾದ್ ಸುದೇಮುಗೇರು, ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸದಸ್ಯರಾದ ರಾಜೇಶ್ ಆರಂಬೋಡಿ, ಕುತ್ಯಾರು ಫ್ರೆಂಡ್ಸ್ ನ ಉಮೇಶ್ ಕುಲಾಲ್, ಪ್ರಕಾಶ್ ಆಚಾರ್ಯ, ಶರತ್ ಶೆಟ್ಟಿ, ಸ್ವಸ್ತಿಕ್, ಅರವಿಂದ ಲಾಯಿಲ, ಗಣೇಶ್ ಲಾಯಿಲ, ಕರುಣಾಕರ ಬಂಗೇರ, ಚಂದ್ರರಾಜ್, ಪವನ್ ಬಂಗೇರ, ಅಭಿಲಾಷ್ ಗೌಡ, ಜಗದೀಶ್ ಕನ್ನಾಜೆ, ಮಂಜುನಾಥ್ ವಿ, ದಿಗಂತ್ ಮತ್ತು ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading