ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ (ರಿ) ಇದರ ವಿಶೇಷ ಸಭೆಯು ಸುಳ್ಯ ವಕೀಲರ ಭವನದಲ್ಲಿ ಜಿಲ್ಲಾ ಅಧ್ಯಕ್ಷರಾದ ರಿಚರ್ಡ್ ಡಿ’ಕೊಸ್ತಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠದ ಮುಂದಿನ ರೂಪುರೇಷೆಗಳ ಬಗ್ಗೆ, ವಕೀಲರ ಶ್ರೇಯೋಭಿವೃದ್ಧಿಗಾಗಿ ಸೊಸೈಟಿಯನ್ನು ರಚಿಸುವ ಬಗ್ಗೆ, ವಕೀಲರ ಸಂಘಗಳ ಅಭಿವೃದ್ಧಿ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಮಂಗಳೂರು ನಿಕಟಪೂರ್ಣವ ಅಧ್ಯಕ್ಷರು ರಾಘವೇಂದ್ರ ಹೆಚ್ ವಿ, ಸುಳ್ಯ ಅಧ್ಯಕ್ಷರು ಸುಕುಮಾರ್ ಕುರ್ತುಕುಳಿ, ಮೂಡಬಿದ್ರೆ ನಿಕಟ ಪೂರ್ವ ಅಧ್ಯಕ್ಷರು ಹರೀಶ್, ಜಗನ್ನಾಥ ರೈ, ದಯಾನಂದ್, ಬೆಳ್ತಂಗಡಿ ನಿಕಟಪೂರ್ವ ಕಾರ್ಯದರ್ಶಿ ದ.ಕ. ಜಿಲ್ಲಾ ಜೊತೆ ಕಾರ್ಯದರ್ಶಿ ನವೀನ್ ಬಿ.ಕೆ., ಕಾರ್ಯದರ್ಶಿ ಜಯಪ್ರಕಾಶ್ ಸದಸ್ಯರುಗಳಾದ ಮನೋಹರ್ ಕುಮಾರ್ ಎ, ಶ್ರೀನಿವಾಸ ಗೌಡ ಬೆಳಾಲು, ನರೇಂದ್ರ ಬಂಟ್ವಳ ಉಪಸ್ಥಿತರಿದ್ದರು.
Discover more from Nammura Suddi
Subscribe to get the latest posts sent to your email.
