ಉಪ್ಪಿನಂಗಡಿ : ಆರ್. ಕೆ. ಚಿನ್ನದಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಕಳೆದ ನಾಲ್ಕು ವರ್ಷಗಳಿಂದ ಪುತ್ತೂರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ರಲ್ಲಿ ಆರ್. ಕೆ. ಚಿನ್ನದಂಗಡಿಯಲ್ಲಿ ಕಳ್ಳತನ ಪ್ರಕರಣ ಸಂಬಂಧ ರಾಜಸ್ಥಾನ ರಾಜ್ಯದ ಬೂಂದಿ ಜಿಲ್ಲೆಯ ಗುರುದ್ವಾರ ಹತ್ತಿರ ಡೊಂಗ್ರಿ ನಿವಾಸಿ ಮೊಹಮ್ಮದ್ ಮಗ ಜಮಿಲ್ ಚಾಚಾ (62ವ) ಎಂಬಾತ ಬಂಧನವಾಗಿ ಜೈಲು ಶಿಕ್ಷೆ ಅನುಭವಿಸಿ ಬಳಿಕ ನ್ಯಾಯಾಲಯದ ವಿಚಾರಣೆಗೆ ಕಳೆದ ನಾಲ್ಕು ವರ್ಷಗಳಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿ ಹೆಚ್.ಸಿ. ಗಜೇಂದ್ರ ನಾಯ್ಕ್ ಮತ್ತು ರಾಮಣ್ಣ ಗೌಡ ಆ.೨೨ ರಂದು ರಾಜಸ್ಥಾನ ರಾಜ್ಯದ ಬೂಂದಿ ಜಿಲ್ಲೆಯ ತಿರತ್ ಮೇರಾನ್ ಎಂಬಲ್ಲಿದ್ದ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕರೆತಂದು ಆ.೨೪ ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು. ಆರೋಪಿಗೆ ೧೦ ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ವಿಧಿಸಿದೆ.
ಬೆಳ್ತಂಗಡಿ ಉಪವಿಭಾಗ ಡಿ.ವೈ.ಎಸ್.ಪಿ. ರೋಹಿನಿ ಸಿ.ಕೆ. ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಇನ್ಸ್‌ಪೆಕ್ಟರ್ ನಾಗರಾಜ್. ಹೆಚ್.ಇ. ನೇತೃತ್ವದಲ್ಲಿ ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ಸುತೇಶ್ ತಂಡದ ಸಿಬ್ಬಂದಿ ಗಜೇಂದ್ರ ನಾಯ್ಕ್ ಮತ್ತು ರಾಮಣ್ಣ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading