ಬೆಳ್ತಂಗಡಿ : ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಾಮುಕ ಚಂದ್ರಶೇಖರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಸುದೀರ್ಘ 25 ವರ್ಷಗಳ ಕಾಲ ವರ್ಗಾವಣೆ ಮಾಡಿಕೊಳ್ಳದೆ ಬೀಡುಬಿಟ್ಟಿದ್ದ ಔಷಧಿ ವಿಭಾಗದ ಮುಖ್ಯಸ್ಥನಾಗಿರುವ ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಕೆದ್ದು ನಿವಾಸಿಯಾಗಿರುವ ಚಂದ್ರಶೇಖರ್ ತನ್ನ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಔಷಧಾಲಯದ ಉಗ್ರಾಣದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದು. ಈ ಬಗ್ಗೆ ಯಾರಲ್ಲದ್ದರೂ ಹೇಳಿದ್ರೆ ಕೆಲಸದಿಂದ ತೆಗೆಯುವುದಾಗಿ ಪದೆ ಪದೆ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜೂ. 11 ರಂದು BNS -2023(u/s-75(3),79,351(2)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಶೇಖರ್ ವಿರುದ್ಧ ಆಸ್ಪತ್ರೆಯಲ್ಲಿ ಮೇಡಿಕಲ್ ಸಾಮಾಗ್ರಿಗಳನ್ನು ಖಾಸಗಿ ಮೇಡಿಕಲ್ ಗಳಿಗೆ ಸಾಗಿಸುತ್ತಿರುವ ಆರೋಪಗಳು ಈ ಹಿಂದಿನಿಂದ ಕೇಳಿಬರುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಲವಾರು ಭಾರಿ ದೂರು ನೀಡಿದ್ರೂ ಇಲಾಖೆ ಇದುವರೆಗೆ ಯಾವುದೇ ಕ್ರಮ ಗೊಂಡಿಲ್ಲ, ಇದಕ್ಕೆಲ್ಲ ಕಾರಣ ಚಂದ್ರಶೇಖರ್ ಗೆ ಇಲಾಖೆಯ ಮೇಲಾಧಿಕಾರಿಗಳ ಬೆಂಬಲವಿದೆ ಎನ್ನಲಾಗಿದೆ. ಅದಲ್ಲದೆ ಹಲವರು ಯುವತಿಯರಿಗೆ ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪಗಳು ಕೂಡ ಕೇಳಿ ಬಂದಿದ್ದು, ಭಯದಿಂದ ಮಾರ್ಯಾದೆಗೆ ಅಂಜಿ ಯಾರು ದೂರು ಕೊಡಲು ಮುಂದೆ ಬಂದಿರಲ್ಲಿಲ್ಲ ಎಂದು ತಿಳಿದುಬಂದಿದೆ. ಇದೀಗ ಆಸ್ಪತ್ರೆಯ ಸಿಬ್ಬಂದಿ ಧೈರ್ಯದಿಂದ ಲೈಂಗಿಕ ಕಿರುಕುಳವನ್ನು ಮನೆಯವರಿಗೆ ತಿಳಿಸಿ ದೂರು ಕೊಟ್ಟಿದ್ದಾರೆ.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading