ಬೆಳ್ತಂಗಡಿ : ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆಯಾದ ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಗೌರವ ಸನ್ಮಾನ ಸಮಾರಂಭವು ಜೂ 28 ರಂದು ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ನಡೆಯಲಿದೆ.

ಬೆಳಗ್ಗೆ 9 ಗಂಟೆಗೆ ಅಳದಂಗಡಿಯ ಸ್ವರಾಜ್ ಟವರ್ಸ್ ಸಭಾಭವನದಲ್ಲಿ ಅಳದಂಗಡಿ ಮತ್ತು ನಾರಾವಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಾದ ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು, ಸುಲ್ಕೇರಿ, ನಾವರ, ಕುದ್ಯಾಡಿ, ಬಳೆಂಜ, ನಾಲ್ಕೂರು, ತೆಂಕಕಾರಂದೂರು, ಗರ್ಡಾಡಿ, ಪಡಂಗಡಿ, ಕುಕ್ಕೇಡಿ, ನಿಟ್ಟಡೆ, ಮೇಲಂತಬೆಟ್ಟು, ಸವಣಾಲು, ಮುಂಡೂರು, ಶಿರ್ಲಾಲು, ಕರಂಬಾರು, ನಾರಾವಿ, ಕುತ್ಲೂರು, ಸಾವ್ಯ, ಅಂಡಿಂಜೆ, ಕೊಕ್ರಾಡಿ, ಕಾಶಿಪಟ್ನ, ಮರೋಡಿ, ಪೆರಾಡಿ, ಹೊಸಂಗಡಿ, ಬಡಕೋಡಿ, ಆರಂಬೋಡಿ, ಗುಂಡೂರಿ, ಬಜಿರೆ, ಕರಿಮಣೇಲು, ಮೂಡುಕೋಡಿ, ವೇಣೂರು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ
ಬೆಳಗ್ಗೆ 11 ಗಂಟೆಗೆ ಲಾಯಿಲದ ಸಂಗಮ ಸಭಾಭವನದಲ್ಲಿ ಕಣಿಯೂರು, ಕುವೆಟ್ಟು ಹಾಗೂ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ತಣ್ಣೀರುಪಂಥ, ಬಾರ್ಯ, ಕರಾಯ, ತೆಕ್ಕಾರು, ಪುತ್ತಿಲ, ಬಂದಾರು, ಉರುವಾಲು, ಕಣಿಯೂರು, ಮೊಗ್ರು, ಇಳಂತಿಲ, ಕಳಿಯ, ನ್ಯಾಯತರ್ಪು, ಮಚ್ಚಿನ, ಪಾರೆಂಕಿ, ಕುಕ್ಕಳ, ಓಡಿಲ್ನಾಳ, ಸೋಣಂದೂರು, ಮಾಲಾಡಿ, ಕುವೆಟ್ಟು, ಕೊಯ್ಯೂರು, ಬೆಳ್ತಂಗಡಿ ನಗರದ ವಿದ್ಯಾರ್ಥಿಗಳಿಗೆ

ಮದ್ಯಾಹ್ನ 2 ಗಂಟೆಗೆ ಉಜಿರೆಯ ಅನುಗ್ರಹ ಸಭಾಭವನದಲ್ಲಿ ಉಜಿರೆ, ಲಾಯಿಲ ಹಾಗೂ ಧರ್ಮಸ್ಥಳದ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಲಾಯಿಲ, ನಡ, ಕನ್ಯಾಡಿ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ನೆರಿಯ, ಪುದುವೆಟ್ಟು, ಕಲ್ಮಂಜ, ಉಜಿರೆ, ಬೆಳಾಲು, ಧರ್ಮಸ್ಥಳ, ಪಟ್ರಮೆ, ಕಳೆಂಜ, ನಿಡ್ಲೆ, ಶಿಬಾಜೆ, ಶಿಶಿಲ, ರೆಖ್ಯಾ, ಹತ್ಯಡ್ಕ, ಕೊಕ್ಕಡದ ವಿದ್ಯಾರ್ಥಿಗಳಿಗೆ ಶ್ರಮಿಕ “ಪ್ರತಿಭಾ ವಿದ್ಯಾರ್ಥಿ”ಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
Discover more from Nammura Suddi
Subscribe to get the latest posts sent to your email.
