ಮೂಡುಬಿದಿರೆ: ದ ಯನೆಪೋಯ ಕಾಲೇಜಿನಲ್ಲಿ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಐದು ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ಅ. 14 ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ್ ಶೆಟ್ಟಿ ಇವರು ವೃತ್ತಿ ಜೀವನದಲ್ಲಿ ವಿವಿಧ ಕೌಶಲ್ಯಗಳು ಅತ್ಯಂತ ಅವಶ್ಯಕ ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಗತ್ಯ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಅಂತಹ ಕೌಶಲ್ಯಗಳು ಉತ್ತಮ ಭವಿಷ್ಯಕ್ಕೆ ಪೂರಕವಾಗಿರುತ್ತದೆ ಎಂದರು.

ಕೌಶಲ್ಯ ತರಬೇತುದಾರರಾದ ಕೃಷ್ಣಕುಮಾರ್ ಟಿ. ಇವರು ಮಾತನಾಡಿ ವೃತ್ತಿ ಜೀವನದಲ್ಲಿ ಬೇಕಾದ ಕೌಶಲ್ಯಗಳು ಹಾಗೂ ರಾಷ್ಟೀಯ ಕೌಶಲ್ಯ ಅಭಿವೃದ್ಧಿ ನಿಗಮದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ತರಬೇತಿ ಕಾರ್ಯಾಗಾರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ದ ಯೆನೆಪೋಯ ಕಾಲೇಜಿನ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಯೋಜಕರಾದ ಪ್ರೊ.ರೋಹಿತ್ ಎ. ಆರ್. ಮತ್ತು ಪ್ಲೇಸ್ಮೆಂಟ್ ಸೆಲ್ ನ ಸಂಯೋಜಕರಾದ ಪ್ರೊ. ಶಿವಪ್ರಸಾದ್ ಉಪಸ್ಥಿತರಿದ್ದರು. ಕು. ಇಸ್ರ ನಯಾಬ್ ನಿರೂಪಿಸಿದ ಕಾರ್ಯಕ್ರಮವನ್ನು ಕು. ಸಫ್ವಾ ಅಂಜುಮ್ ಸ್ವಾಗತಿಸಿ, ಕು. ಫಾತಿಮತ್ ಶಿಫಾ ವಂದಿಸಿದರು.

Leave a Reply

Discover more from Nammura Suddi

Subscribe now to keep reading and get access to the full archive.

Continue reading