ಮಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಕಿಶೋರ್ ಕುಮಾರ್ ಬೊಟ್ಯಾಡಿಗೆ ಗೆಲುವು ಲಭಿಸಿದೆ. ಕೋಟ ಶ್ರೀನಿವಾಸ ಪೂಜಾರಿ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು, ಅದರಂತೆ ಇಂದು ಗುರುವಾರ (ಅ.24) ಚುನಾವಣಾ ಫಲಿತಾಂಶ ಹೊರಬಿದ್ದಿದೆ.

ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಅಂದಾಜು 3655 ಮತ ಗಳಿಸಿದ್ದರೆ, ಕಾಂಗ್ರೆಸ್ ನ ರಾಜು ಪೂಜಾರಿ 1958 ಮತ, ಎಸ್.ಡಿ.ಪಿ.ಐ. ಪಕ್ಷದ ಅನ್ವರ್ ಸಾದತ್ ಬಜತ್ತೂರು 195 ಮತ ಹಾಗೂ ಸ್ವತಂತ್ರ ಅಭ್ಯರ್ಥಿ ದಿನಕರ್ ಉಲ್ಲಾಲ್ ಅವರು 9 ಮತಗಳನ್ನು ಪಡೆದಿರುತ್ತಾರೆ. 90 ಮತಗಳು ಅಸಿಂಧುಗೊಂಡಿದೆ.

Leave a Reply

Discover more from Nammura Suddi

Subscribe now to keep reading and get access to the full archive.

Continue reading