ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವತಿಯಿಂದ ಅನಾರೋಗ್ಯಕ್ಕೊಳಗಾದ ಸದಸ್ಯ ಗೋಪಾಲ ಪೂಜಾರಿ ಉಜಿರೆ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಆರ್ಥಿಕ ಸಹಕಾರ ನೀಡುವ ಮೂಲಕ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.
ಈ ಸಂಧರ್ಭ ವಲಯದ ಅಧ್ಯಕ್ಷ ರವಿ ಪೂಜಾರಿ ನಾರಾವಿ, ಕಾರ್ಯದರ್ಶಿ ದಾಮೋದರ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ, ಉಪಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ, ಸಂಘಟನಾ ಕಾರ್ಯದರ್ಶಿ ಗಂಗಾಧರ ಉಜಿರೆ, ಛಾಯಾ ಕಾರ್ಯದರ್ಶಿ ಸಂದೇಶ್ ನಿಡ್ಲೆ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಜ್ ಉಜಿರೆ, ಗೌರವ ಸಲಹೆಗಾರರಾದ ಜಗಧೀಶ್ ಜೈನ್ ಧರ್ಮಸ್ಥಳ, ಗೋಪಾಲ ಎನ್.ಎ. ಅಳದಂಗಡಿ, ಉಮೇಶ್ (ರಾಕೇಶ್) ಉಜಿರೆ, ಸುರೇಶ್ ಕೌಡಂಗೆ, ಸದಸ್ಯರಾದ ಸುಧಾಕರ ಗೇರುಕಟ್ಟೆ, ಲೋಕೇಶ್ ಅಣಿಯೂರು ಉಪಸ್ಥಿತರಿದ್ದರು.

Leave a Reply

Discover more from Nammura Suddi

Subscribe now to keep reading and get access to the full archive.

Continue reading