ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಇವರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 6ನೇ ವರ್ಷದ ದೀಪಾವಳಿ ದೋಸೆ ಹಬ್ಬ 2025 ಹಾಗೂ ಗೋ ಪೂಜಾ ಉತ್ಸವವು ಅ.20 ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆಯಲಿದೆ.
ಈ ಬಾರಿಯ ದೋಸೆ ಹಬ್ಬದಲ್ಲಿ ವಿಶೇಷವಾಗಿ ಬೆಳಿಗ್ಗೆ 8 ಗಂಟೆಗೆ ನಮೋ ಮ್ಯಾರಥಾನ್ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ದೋಸೆ ಹಬ್ಬ ಉದ್ಘಾಟನೆಗೊಳ್ಳಲಿದೆ. 10 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಂಸ್ಕೃತಿಕ ತುಡರ್ ನೃತ್ಯ ಸ್ಪರ್ಧೆ 2025, ಸಂಜೆ 4 ಗಂಟೆಯಿಂದ 7 ವರ್ಷದೊಳಗಿನ ಮಕ್ಕಳಿಗಾಗಿ ಬೆಳ್ತಂಗಡಿ ತಾಲೂಕು ಮಟ್ಟದ ಬಾಲೆ ಪಿಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಅಕ್ಟೋಬರ್ 16ರ ಒಳಗೆ ಹೆಸರನ್ನು ನೋಂದಾಯಿಸಬಹುದು. ನೋಂದಾಯಿಸಲು ಸಂಪರ್ಕಿಸಿ. 8277165541, 9741732648.