ಬೆಳ್ತಂಗಡಿ : ಹಳೆ ದ್ವೇಷವನ್ನು ಇಟ್ಟುಕೊಂಡು ಅತ್ತೆ ಮನೆಗೆ ಹೋಗಿ ಅವ್ಯಾಚ ಶಬ್ದಗಳಿಂದ ಆಳಿಯ ಬೈದು ಬಳಿಕ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣ ಸಂಬಂಧ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ: ಆರೋಪಿ ಪ್ರಸನ್ನ ಕುಮಾರ್ ದೂರುದಾರ ಸುಜಾತ ಅವರ ಗಂಡನ ತಮ್ಮನಾಗಿದ್ದು ಸುಮಾರು 3 ರಿಂದ 4 ವರ್ಷಗಳ ಹಿಂದೆ ಆರೋಪಿ ಪ್ರಸನ್ನ ಕುಮಾರ್ ತನ್ನ ಸಂಬಂಧಿ ಸತೀಶ್ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿತನಾಗಿ ಜೀವನ ಪರ್ಯಾಂತ ಜೈಲಿನಲ್ಲಿ ಕೊಳೆಯಬೇಕು ಎಂದು ಹೇಳುತ್ತಿದ್ದ. ಈ ವಿಚಾರದಲ್ಲಿ ದ್ವೇಷ ಹೊಂದಿ ಆಗಾಗ ದೂರುದಾರರ 54 ವರ್ಷದ ತಾಯಿಯೊಂದಿಗೆ ಮಾತಿನ ಗಲಾಟೆ ನಡೆಸಿ ದೂರುದಾರರ ತಾಯಿಯನ್ನು ಕೊಲೆ ಮಾಡಿ ಬಳಿಕ ದೂರುದಾರರನ್ನು ಕೊಲೆ ಮಾಡುವುದಾಗಿ ಹೇಳುತ್ತಿದ್ದು. ಇದೇ ವಿಚಾರದಲ್ಲಿ ಪೂರ್ವ ದ್ವೇಷ ಹೊಂದಿ ಮೇ.19 ರಂದು ಮದ್ಯಾಹ್ನ ಸುಮಾರು 12:45 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ದೆಲೋಡಿ ಮನೆಗೆ ದೂರುದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಮಾರಕ ಆಯುಧವಾದ ಉದ್ದನೆಯ ಕತ್ತಿಯನ್ನು ಹಿಡಿದು ದೂರುದಾರರ ತಾಯಿಯನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕತ್ತಿಯಿಂದ ತಲೆಗೆ, ಮುಖಕ್ಕೆ, ಕೈಕಾಲುಗಳಿಗೆ ಕಡಿದು ತೀವ್ರ ಹಲ್ಲೆ ನಡೆಸಿದ್ದು ದೂರುದಾರರ ತಾಯಿಯನ್ನು ಮೂಡಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಪ್ರಕರಣ ದಾಖಲು: ವೇಣೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಾಗದ ಮಹಿಳೆಯ ಮಗಳು ನೀಡಿದ ದೂರಿನ ಮೇರೆಗೆ ಮೇ.19 ರಂದು BNS -2023(329(4), 352, 118(2), 109) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು.


ಕಾರ್ಯಾಚರಣೆ: ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದ ವೇಣೂರು ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ತಂಡ ಆರೋಪಿ ಆಳಿಯ ಹೊಸಂಗಡಿ ನಿವಾಸಿ ಪ್ರಸನ್ನ ಕುಮಾರ್ (33) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ವೇಣೂರಿನ ಕುರ್ಲೊಟ್ಟು ಜಂಕ್ಷನ್ ನಲ್ಲಿ ಮೇ 20 ರಂದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Discover more from Nammura Suddi

Subscribe now to keep reading and get access to the full archive.

Continue reading