ಬೊಂಬೆ ಮಾರೋನ ಹತ್ತಿರ
ಎಲ್ಲಾ ರೀತಿಯ ಬಗೆಬಗೆಯ ಬೊಂಬೆ ಇರುತ್ತೆ
ಅಳುವ ಬೊಂಬೆ, ನಗುವ ಬೊಂಬೆ,
ಮುನಿಸಿನ ಬೊಂಬೆ, ನೊಂದ ಬೊಂಬೆ,
ಚಿಂತೆಯ ಬೊಂಬೆ, ವಾತ್ಸಲ್ಯದ ಬೊಂಬೆ,
ವಿನಯದ ಬೊಂಬೆ, ವಿಷಾದದ ಬೊಂಬೆ…
ಹೀಗೆ ಇನ್ನೂ ತರತರಹದ ಬೊಂಬೆ
ಅವನ ಹತ್ತಿರ ಮಾರಾಟಕ್ಕೆ ಅಂತ ಇರುತ್ತೆ
ಆದರೆ ಅವೆಲ್ಲ ಜೀವವಿಲ್ಲದ ಬೊಂಬೆ…
ಬೀದಿ ಬೀದಿ ಅಲೆದು ಬೊಂಬೆ ಮಾರೋನ
ಹೆಗಲ ಮೇಲೆ ನೂರು ಕನಸು, ಭರವಸೆಯ ಹೊತ್ತವನು
ಅವನ ಬಳಿ ಇರೋ ಎಲ್ಲಾ ಬೊಂಬೆಗಳು ನಿರ್ಜೀವವಾದವು
ಆದರೆ ಅವುಗಳ ಮುಖವಾಡ ಇವನ ಜೀವನದ ಆಧಾರ..
ಮುಖವಾಡಗಳೇ ಆಧಾರವಾದಾಗ
ಆ ಮುಖವಾಡದ ಹಿಂದಿನ ಮನಸ್ಸು ಯಾರಿಗೂ ಬೇಡ…
ಏನೇ ಆದರೂ ಮುಖ ಮತ್ತು ಮನಸ್ಸಿಗಿಂತ
ಮುಖವಾಡಕ್ಕೆ ಬೆಲೆ ಜಾಸ್ತಿ …
✒️… ಅಲೆಮಾರಿ…🤍
ರಾಜೇಶ್ ಎಂ.

