ಬೆಳ್ತಂಗಡಿ: ಹೆದ್ದಾರಿಯ ಸರ್ವಿಸ್ ರಸ್ತೆಗೆ ತಾಗಿಕೊಂಡಿರುವ ಅಕ್ರಮ ಕಟ್ಟಡಕ್ಕೆ ವಾಹನವೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಲಾಯಿಲದಲ್ಲಿ ಅ.3 ರಂದು ರಾತ್ರಿ ನಡೆದಿದೆ.ಲಾಯಿಲ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಮಕಕೈಲಿ ನರ್ಸರಿ ಮಾಲೀಕರಾದ ತೋಮಸ್ ಎಂಬವರು ರಸ್ತೆ ಮಾರ್ಜೀನ್ ನಲ್ಲಿ ಅನಧಿಕೃತವಾಗಿ ಯಾವುದೇ ಇಲಾಖೆಗಳಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ಮಾಡಿದ್ದು, ಈ ಕಟ್ಟಡಕ್ಕೆ ಬಜಾಜ್ QUTE ಬಾಡಿಗೆ ವಾಹನವೊಂದು ಸೆ.3 ರಂದು ರಾತ್ರಿ 11 ಗಂಟೆಗೆ ಬೆಳ್ತಂಗಡಿ ಕಡೆಯಿಂದ ಲಾಯಿಲ ಸರ್ವಿಸ್ ರಸ್ತೆಯಲ್ಲಿ ಬರುವಾಗ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ವಾಹನ ಚಾಲಕ ರೋಶನ್ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದ್ದು ತಕ್ಷಣ ಸ್ಥಳೀಯ ನಿವಾಸಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಾಹನದ ಮುಂದಿನ ಭಾಗ ಡಿಕ್ಕಿ ರಭಸಕ್ಕೆ ಹಾನಿಯಾಗಿದೆ.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading