Month: August 2026

ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ

ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ವಾರೆಂಟ್ ಆರೋಪಿಯನ್ನು ವೇಣೂರು ಪೊಲೀಸರು ಪುತ್ತೂರಿನ ದರ್ಬೆಯಲ್ಲಿ ಬಂಧಿಸಿದ್ದಾರೆ.ಈತನ ವಿರುದ್ಧ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ಅಕ್ರ 71/2008ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದ CC No.535/2016ರಲ್ಲಿ…

ಅಪ್ರಾಪ್ತ ಬಾಲಕಿಯನ್ನು ರಾತ್ರಿವೇಳೆ ಕಾರಿನಲ್ಲಿ ಕರೆದುಕೊಂಡು ಹೋದಾತನ ಮೇಲೆ ಹಲ್ಲೆ – ಹಲ್ಲೆ ನಡೆಸಿದ ಐವರು ಮತ್ತು ಬಾಲಕಿಯನ್ನು ಕರೆದುಕೊಂಡು ಹೋದಾತನ ಮೇಲೆ ಪ್ರಕರಣ ದಾಖಲು

ಕೊಕ್ಕಡ: ತನ್ನ ಪರಿಚಯಸ್ಥರ ಮಗಳು ಎಂದು ಅಪ್ರಾಪ್ತ ಬಾಲಕಿಯನ್ನು ರಾತ್ರಿ ವೇಳೆ ಹಾಸನ ಕಡೆಗೆ ಕರೆದುಕೊಂದು ಹೋಗುತ್ತಿರುವ ವೇಳೆ ಗುಂಪೊಂದು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಘಟನೆ ಕೊಕ್ಕಡದ ಕಾಪಿನಬಾಗಿಲು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ಐವರು ಮತ್ತು…

ಹೊಟೇಲ್ ನಡೆಸುತ್ತಿದ್ದ ಕುಟುಂಬದ ಮೇಲೆ ಹಲ್ಲೆ – ಮಾನಭಂಗ ಯತ್ನ : ಐದು ಮಂದಿಯ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಐದು ಮಂದಿಯ ತಂಡ ಹೊಟೇಲಿಗೆ ಬಂದು ಮಹಿಳೆ ಸೇರಿದಂತೆ ಒಂದೇ ಕುಟುಂಬದ ನಾಲ್ಕು ಮಂದಿ ಸದಸ್ಯರಿಗೆ ಅವ್ಯಾಚ ಶಬ್ದಗಳಿಂದ ಬೈದು ಬಳಿಕ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ…

ಬೆಳ್ತಂಗಡಿ ತಾಲೂಕು ಕಛೇರಿ ಮೇಲೆ ಲೋಕಾಯುಕ್ತ ದಾಳಿ

ಬೆಳ್ತಂಗಡಿ : ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿ ಕಂದಾಯ ಇಲಾಖೆ ಮೇಲೆ ದಿಢೀರ್ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.ಬೆಳ್ತಂಗಡಿ ಆಡಳಿತ ಸೌಧದಲ್ಲಿರುವ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಂದ ಲಂಚ ಪಡೆದು ಕೆಲಸ ಮಾಡುತ್ತಿರುವ ಬಗ್ಗೆ ಬಂದ ದೂರಿನ ಬಗ್ಗೆ ಆ.12 ರಂದು ಬೆಳಗ್ಗೆ…

ಮಳೆಹಾನಿ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ಮಳೆಯಿಂದ ಹಾನಿಗೊಳಗಾದ ಬಿಷಪ್ ಹೌಸ್ ಬೆಳ್ತಂಗಡಿ ಹಾಗೂ ಸೈಂಟ್ ಮೆರೀಸ್ ಚರ್ಚ್ ಮುಂಡಾಜೆ ಇಲ್ಲಿನ ಪ್ರದೇಶಗಳಿಗೆ ಶಾಸಕರಾದ ಹರೀಶ್ ಪೂಂಜರವರು ಭೇಟಿ ನೀಡಿ ಪರಿಸೀಲಿಸಿದರು.ಈ ಸಂದರ್ಬದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಜೇಮ್ಸ್ ಪಟೇರಿಯಲ್, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ…

ನೀರಚಿಲುಮೆ ಬಳಿ ಬೈಕ್ ಮತ್ತು ಬಸ್ ನಡುವೆ ಅಪಘಾತ ಓರ್ವ ಸಾವು – ಮತ್ತೋರ್ವ ಗಂಭೀರ

ಉಜಿರೆ: ಬೈಕ್ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಆ.11ರಂದು ಬೆಳಗ್ಗೆ ನೀರಚಿಲುಮೆಯ ಸರಕಾರಿ ಶಾಲೆ ಬಳಿಯ ತಿರುವಿನಲ್ಲಿ ನಡೆದಿದೆ.ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ…

ಮಾದಕ ವಸ್ತು ಸೇವನೆ ಮಾಡಿದ ಕುಕ್ಕೇಡಿಯ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಮಾದಕವಸ್ತು ಮಾರಾಟ ಮತ್ತು ಸೇವನೆಯ ವಿರುದ್ಧ ಬೆಳ್ತಂಗಡಿ ಉಪವಿಭಾಗ ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಇದೀಗ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ಪೇಟೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ವೇಣೂರು ಪೊಲೀಸ್…

ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ಉಜಿರೆಯಲ್ಲಿ ಆ.14ರಂದು ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ. 10 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ…

ಮಾದಕ ವಸ್ತು ಸೇವನೆ ಪ್ರಕರಣ : ಉಜಿರೆಯ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಅಮಲಿನಲ್ಲಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ವಿರುದ್ಧ ಕಾರ್ಯಾಚರಣೆ ನಡೆಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಮತ್ತು ತಂಡ ಸಿಬ್ಬಂದಿಯೊಂದಿಗೆ ಆ.8…

ನಾಪತ್ತೆಯಾಗಿದ್ದ ಕೊಯ್ಯೂರಿನ ವ್ಯಕ್ತಿಯ ವೃತದೇಹ ಕಣಿಯೂರಿನಲ್ಲಿ ಪತ್ತೆ

ಬೆಳ್ತಂಗಡಿ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಕೊಯ್ಯೂರಿನ ವ್ಯಕ್ತಿಯ ಮೃತದೇಹ ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ಆ 8 ರಂದು ಪತ್ತೆಯಾಗಿದೆ.ಮೃತ ವ್ಯಕ್ತಿ ಕೊಯ್ಯೂರು ಗ್ರಾಮದ ಕೊಂಕದಡ್ಕ ನಿವಾಸಿ ಚಿದಾನಂದ ಯಾನೆ ಉಮೇಶ್ ಗೌಡ (52ವ) ಎಂಬವರಾಗಿದ್ದಾರೆ. ಇವರು ಚಿಕ್ಕಮಗಳೂರು ಜಿಲ್ಲೆಯ…